ಭಟ್ಕಳ: ಭಕ್ತರಿಗೆ ರಸ್ತೆ ನಿರ್ಮಿಸುವ ಮೂಲಕ ಸಚಿವರಾದ ಮಂಕಾಳ ವೈದ್ಯರವರು
ದೇವರ ಸೇವೆಯನ್ನು ಮಾಡಿದ್ದಾರೆ ಎಂದು ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ ಪರಪೂಜ್ಯ ಶ್ರೀಶ್ರೀಶ್ರೀ ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿಯವರು ಹೇಳಿದರು.
ಭಟ್ಕಳದ ಜನತಾ ಬ್ಯಾಂಕ್ ಮುಖ್ಯಶಾಖೆಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರುಗಳು ಆಗಮಿಸುವ ಹಿನ್ನೆಲೆಯಲ್ಲಿ ಸಚಿವರಾದ ಮಂಕಾಳ ವೈದ್ಯರು
ರಸ್ತೆಯನ್ನು ಅತ್ಯಂತ ತ್ವರಿತ ಗತಿಯಲ್ಲಿ ಮುಗಿಸಿಕೊಟ್ಟಿದ್ದಾರೆ. ನಾವು ಹೋಗುವ ಜಾಗದಲ್ಲಿ ಗುರುಗಳಿಗೆ ಹೊಸದಾದ ಮಾರ್ಗದ ದರ್ಶನ ಮಾಡಿಸುತ್ತಿದ್ದಾರೆ. ಅವರ ಕಾರ್ಯಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲಾ ಹೊಸ ಮಾರ್ಗದ ದರ್ಶನವಗುತ್ತಿರುವುದು ಸಂತಸಕರ ವಿಷಯವಾಗಿದೆ. ಒಬ್ಬ ರಾಜಕಾರಣಿಯಾದವನು ರಾಜಕಾರಣಕ್ಕೆ ಬರುವಾಗ ಸ್ವಹಿತಾಸಕ್ತಿಯನ್ನು ಬಿಟ್ಟು ಜನರಿಗೆ ಬಂದ ಸಂಕಷ್ಟವನ್ನು ಪರಿಹರಿಸುವ ಮಾತುಗಳನ್ನಾಡುತ್ತಾನೆ. ಮಂಕಾಳ ವೈದ್ಯರು ಆ ಮಾತಿಗೆ ಬದ್ಧರಾಗಿ ಕೆಲಸಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಸಚಿವ ಮಂಕಾಳ ವೈದ್ಯ ಮಾತನಾಡಿ ಗುರುಗಳ ಸೇವೆ ಮಾಡುವುದು ನಮಗೆ ಒದಗಿದ ಬಂದ ಸೌಭಾಗ್ಯವಾಗಿದೆ. ಯಾವುದೇ ಗುರುಗಳಾದರೂ ಅವರು ನಮ್ಮ ಕ್ಷೇತ್ರದಲ್ಲಿರುವಾಗ ನಾನು ಕ್ಷೇತ್ರದ ಹೊರಗಿದ್ದರೆ ಬೇಸರವಾಗುತ್ತದೆ. ಗುರುಗಳ ಆಶಿರ್ವಾದ ಮಾರ್ಗದರ್ಶನ ಬಹುಮುಖ್ಯವಾಗಿದ್ದು. ಗುರುಗಳ ಪಾದ ಸ್ಪರ್ಶ ಎಲ್ಲಿ ಅಗುತ್ತದೋ ಅಲ್ಲಿ ಎಲ್ಲವು ಸಾದ್ಯ. ಎಂದೂ ಕೂಡ ಮಠ ಮಂದಿರಗಳಿಗೆ ತೊಂದರೆ ಆಗಬಾರದು ಎಂದು ನಮ್ಮ ಆಶಯ. ನಾವು ಗುರುಗಳ ಮುಂದೆ ಶಿರಬಾಗಿ ನಮಸ್ಕರಿಸಿದರೆ ಪ್ರಪಂಚವನ್ನು ಗೆಲ್ಲಬಹುದು ಎಂದರು.
ಸಚಿವ ಮಂಕಾಳು ವೈದ್ಯ ಮತ್ತು ಮಗಳು ಬೀನಾ ವೈದ್ಯ ಅವರನ್ನು ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ ಪರಪೂಜ್ಯ ಶ್ರೀಶ್ರೀಶ್ರೀ ಶ್ರೀಮದ್ ವಿದ್ಯಾದೀಶ ತಿರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿಯವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಪ್ರದೀಪ ಪೈ, ಸುರೇಂದ್ರ ಶಾನಬಾಗ್, ಭಟ್ಕಳ ಎಜುಕೇಶನ್ ಟ್ರಸ್ಟನ್ ಟ್ರಸ್ಟಿ ಸುರೇಶ ನಾಯಕ ಮತ್ತಿತರರು ಹಾಜರಿದ್ದರು.