ಉಡುಪಿ: ಜೀವನದಲ್ಲಿ ಎದುರಾದ ಅಸಹಾಯಕ ಪರಿಸ್ಥಿತಿಯಿಂದಾಗಿ ಭೀಕ್ಷಾಟನೆಯಿಂದ ಉಡುಪಿಯಲ್ಲಿ ಜೀವನ ನಿರ್ವಹಿಸುತ್ತಿದ್ದ ವೃದ್ಧರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ, ಉಡುಪಿಯ ಮಲಬಾರ್ ಗೋಲ್ಡ್ ಆಭರಣ ಮಳಿಗೆಯ ಸಿಬ್ಬಂದಿಯವರು ವೃದ್ಧರನ್ನು ರಕ್ಷಿಸಿ ಸುರಕ್ಷಿತವಾಗಿ ಅವರ ಊರಾದ ಚೆನ್ನೈಗೆ ರವಾನಿಸಿ ಮಾನವೀಯತೆ ಮೆರೆದರು.
ಮಲಬಾರ್ ಗೋಲ್ಡ್ ಸಂಸ್ಥೆಯು ಪತ್ರಿ ನಿತ್ಯ ಮುಂಜಾನೆ ನಗರದಲ್ಲಿ ನೆಲೆಕಂಡಿರುವ ಅನಾಥರಿಗೆ ಅಸಹಾಯಕರಿಗೆ ಉಪಹಾರದ ಪೊಟ್ಟಣಗಳನ್ನು ವಿತರಿಸುತ್ತಿದೆ. ಆ ಸಮಯದಲ್ಲಿ ವೃದ್ದರು ಆಹಾರದ ಪೊಟ್ಟಣವನ್ನು ಸ್ವೀಕರಿಸುತ್ತಿದ್ದರು. ತನ್ನ ಹೆಸರು ಎಂ.ಪ್ರಭಾವಾಸನ್ ಚೆನ್ನೈಯ ನಿವಾಸಿ, ಅಸಹಾಯಕ ಪರಿಸ್ಥಿತಿಯಲ್ಲಿರುವೆನು. ಊರಿಗೆ ಹೋಗಲು ವ್ಯವಸ್ಥೆಗೊಳಿಸುವಂತೆ ಆಹಾರ ಪೊಟ್ಟಣ ವಿತರಣಾ ಸಿಬ್ಬಂದಿಯವರಲ್ಲಿ ಹೇಳಿಕೊಂಡಿದ್ದರು. ವಿಷಯ ತಿಳಿದ ಮಲಬಾರ್ ಗೋಲ್ಡ್ ಮಳಿಗೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ನೆರವಿಗೆ ಬಂದು, ವೃದ್ಧರನ್ನು ಚಿಕಿತ್ಸೆಗೆ ಒಳಪಡಿಸಿ, ಊರಿಗೆ ರವಾನಿಸಿದರು.
ಕಾರ್ಯಚರಣೆಯಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ಉಡುಪಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ತಂಝೀಮ್ ಶಿರ್ವ, ಕರ್ನಾಟಕ ತನಲ್ ನ
ಪ್ರಾದೇಶಿಕ ಸಂಯೋಜಕರಾದ ಸಿರಾಜ್ ದ್ದೀನ್ ವೈ, ಚೆನ್ನೈ ತನಲ್ ಪ್ರತಿನಿಧಿ ಸಿಂಧೂ, ಕೇಂದ್ರ ತನಲ್
ಪುನರ್ವಸತಿಯ ಮುಖ್ಯಸ್ಥರಾದ ರಿಂಷಾದ್ ಭಾಗಿಯಾಗಿದ್ದರು.