December 23, 2024

ತುರುವೇಕೆರೆ: ಪಟ್ಟಣದ ಪ್ರತಿಷ್ಠಿತ ದೇವರಮನೆ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಎಂಬಸ್ಸಿ ಬಿಕಾಂ ಕಾಲೇಜಿಗೆ ತುಮಕೂರು ವಿಶ್ವವಿದ್ಯಾಲಯದಿಂದ ನಡೆದ ಐದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಕಾಲೇಜಿಗೆ ಶೇಕಡ ನೂರರಷ್ಟು ಫಲಿತಾಂಶ ಬಂದಿರುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಪ್ರೊ.ಗಂಗಾಧರ ದೇವರಮನೆ ತಿಳಿಸಿದರು .
2024ನೇ ಸಾಲಿನಲ್ಲಿ ನಡೆದ ಐದನೇ ಸೆಮಿಸ್ಟರ್ ನಲ್ಲಿ ಕಾಲೇಜಿನ ಮಹಾಲಕ್ಷ್ಮಿ ಎನ್ ಎ 700 ಅಂಕಗಳಿಗೆ 656 ಅಂಕಗಳನ್ನು ಪಡೆದು ಶೇಕಡ 93.71% ಫಲಿತಾಂಶ ಪಡೆದಿರುತ್ತಾರೆ, ದಿವ್ಯಶ್ರೀ.ಎಂ.ಎಸ್ 644 ಅಂಕ, ಪೂಜಾ ಟಿ.ಕೆ 640 ಅಂಕ ಪಡೆದಿರುತ್ತಾರೆ. ಭೂಮಿಕ ಟಿ.ಎಸ್ ಹಾಗೂ ರುಚಿತಾ ಬಿ.ಕೆ ರವರು ಐಟಿ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿರುವುದು ವಿಶೇಷವಾಗಿದೆ.
ಇದೇ ಐಟಿ ವಿಷಯದಲ್ಲಿ ದಿವ್ಯಶ್ರೀ ಎಂ.ಎಸ್, ಪೂಜಾ.ಟಿ.ಕೆ ಹಾಗೂ ಶ್ವೇತಾ.ಎ.ಯು 100 ಕ್ಕೆ 99 ಅಂಕಗಳನ್ನು ಗಳಿಸಿದ್ದಾರೆ. ಈ ನಡುವೆ 68.86 % ಅಂಕಗಳಿಸಿದ ವಿದ್ಯಾರ್ಥಿಯೇ ಅತ್ಯಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಎಂಬುದು ವಿಶೇಷವಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಪೋಷಕರಿಗೆ, ಕಚೇರಿ ಸಿಬ್ಬಂದಿಗಳಿಗೆ, ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಸ್ಥಾಪಕರಾದ ಪ್ರೊ.ಎಂ.ಎಸ್ ಗಂಗಾಧರ ದೇವರಮನೆ, ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ.ನಾಗರಾಜ್, ಲ.ಪಿ.ಹೆಚ್.ಧನಪಾಲ್, ಪ್ರೊ.ಪುಟ್ಟರಂಗಪ್ಪ, ಹೆಲಿಕ್ಯಾಪ್ಟರ್ ರಾಜಶೇಖರ್, ಟಿ.ಎನ್.ಶಶಿಶೇಖರ್, ಬಾಲಚಂದ್ರ, ಟಿ.ಎಸ್.ಹರೀಶ್ ಹಾಗೂ ದೇವರಮನೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶರಿತ ದೇವರಮನೆ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.