ಬೆಂಗಳೂರು: ಭಾರತದಲ್ಲಿ ಆರೋಗ್ಯ ರಕ್ಷಣೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ರಾಮಯ್ಯ ಸ್ಮಾರಕ ಆಸ್ಪತ್ರೆ ದಾಪುಗಾಲಿಟ್ಟಿದೆ.
ಇದು ಕರ್ನಾಟಕದಲ್ಲಿರುವ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಮುಖವಾಗಿದೆ. ಗುರುವಾರ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯಲ್ಲಿ ವಿಶೇಷ ಸಾಧನೆಯನ್ನು ಮಾಡಿದೆ. ಎರಡು ಸ್ಥನ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯನ್ನು ಇಂಟ್ರಾ-ಆಪರೇಟಿವ್ ರೇಡಿಯೇಷನ್ ಥೆರಪಿ(ಐಒಆರ್‌ಟಿ) ಮೂಲಕ ಮಾಡಿ ಯಶಸ್ವಿಯಾಗಿದೆ. ಐಒಆರ್‌ಟಿ ಎಕ್ಸ್ರೇ ಡಿವೈಸ್ ಒಂದೇ ಸಿಟ್ಟಿಂಗ್‌ನಲ್ಲಿ ಶಸ್ತ್ರ ಚಿಕಿತ್ಸೆಯ ನೇರವಾಗಿ ಕ್ಯಾನ್ಸರ್ ಗೆಡ್ಡೆಗಳನ್ನು ತಲುಪುತ್ತವೆ.
ಐಒಆರ್‌ಟಿ ಒಂದು ವಿಕಿರಣ ಚಿಕಿತ್ಸೆಯಾಗಿ ಅನೇಕ ವಾರಗಳ ನಂತರ ಸಾಂಪ್ರದಾಯಿಕ ವಿಕಿರಣ ಚಿಕಿತ್ಸೆಯನ್ನು ಬದಲಾಯಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ನೇರವಾಗಿ ಸಿಂಗಲ್ ಡೋಸ್‌ನಲ್ಲಿ ಕ್ಯಾನ್ಸರ್ ಗೆಡ್ಡೆಗೆ ನೇರವಾಗಿ ನೀಡಲಾಗುತ್ತದೆ. ಗೆಡ್ಡೆಯ ಶಸ್ತ್ರ ಚಿಕಿತ್ಸೆ ನಂತರ ಗಾಯವನ್ನು ಮುಚ್ಚುವ ಮೊದಲು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅದೇ ರೋಗಿಗೆ ನೀಡಲಾಗುತ್ತದೆ.
ಇದು ಸಾಂಪ್ರದಾಯಿಕ ರೇಡಿಯೇಷನ್ ಥೆರಪಿಗಿಂತ ವಿಭಿನ್ನವಾಗಿದೆ. ಇದನ್ನು ರೋಗಿಯು ಶಸ್ತ್ರಚಿಕಿತ್ಸೆಯಿಂದ ಗುಣಮುಖಗೊಂಡ ನಂತರ ನೀಡಲಾಗುತ್ತದೆ. ಐಒಆರ್‌ಟಿ ಒಂದು ಕಾರ್ಯವಿಧಾನವಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರದೇಶವು ತೆರೆದಿರುವಾಗ ಗೆಡ್ಡೆಯ ಹಾಸಿಗೆಗೆ ವಿಕಿರಣವನ್ನು ತಲುಪಿಸುತ್ತದೆ. ಇದು ರೇಡಿಯೇಷನ್‌ನಿಂದಾಗಿ ವಿಕಿರಣ ಬೇರೆ ಕಡೆಗೆ ಹರಡಿಕೊಳ್ಳುವುದನ್ನು ತಡೆಯುತ್ತದೆ. ಆ ಮೂಲಕ ಸುತ್ತಮುತ್ತಲ ಆರೋಗ್ಯಕರವಾದ ಅಂಗಾಂಶಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತೆಗೆದುಹಾಕಲು ಕಷ್ಟಕರವಾದ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಐಒಆರ್‌ಟಿ ಸಹಕಾರಿಯಗಿದೆ ಮತ್ತು ಕನಿಷ್ಠ ಪ್ರಮಾಣದ ಕಾಣದ ಕ್ಯಾನ್ಸರ್ ಗೆಡ್ಡೆಯ ಶಸ್ತ್ರಚಿಕಿತ್ಸೆಯೆಗೆ ಸಹಾಯಕಾರಿಯಾಗಲಿದೆ.
ಈ ಶಸ್ತ್ರಚಿಕಿತ್ಸೆಯನ್ನು ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಆನ್ಕೋಸೈನ್ಸಸ್‌ನ ನಿರ್ದೇಶಕ ಡಾ.ಕೆ.ಹರೀಶ್ ಮತ್ತು ಮುಖ್ಯಸ್ಥ ಮತ್ತು ಹಿರಿಯ ಆಪ್ತಸಹಾಯಕ ಡಾ.ಎ.ಎಸ್.ಕೀರ್ತಿ ಕೌಶಿಕ್ ಮುನ್ನಡೆಸುತ್ತಿದ್ದಾರೆ.
ಸರ್ಜಿಕಲ್ ಅಂಡ್ ರೇಡಿಯೇಷನ್ ತಂಡ ಈಗಾಗಲೇ ಐಒಆರ್‌ಟಿ ಮೂಲಕ ಎರಡು ಸ್ತನ ಕ್ಯಾನ್ಸರ್ ಶಸ್ತ್ರ
ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಈ ಎರಡು ಪ್ರಕರಣಗಳಲ್ಲಿ ರಾಮಯ್ಯ ಆಸ್ಪತ್ರೆಯು ಸಾಕಷ್ಟು ಪರಿವರ್ತಕ ಪರಿಣಾಮವನ್ನು ಕಾಣಲು ಸಾಧ್ಯವಾಗುತ್ತದೆ.
55 ವರ್ಷದ ಮಹಿಳೆ ಕಾರ್ನಿಕೋಮಾ ಸ್ತನ ಕ್ಯಾನ್ಸರ್ ನಿಂದ 2ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇವರು ಐಒಆರ್‌ಟಿ ಚಿಕಿತ್ಸೆಗೆ ಒಳಗಾದರು. ಇದು ಬೂಸ್ಟ್ ಡೋಸ್ ನೀಡಲಾಗಿದೆ.
ಇದೇ ರೀತಿ 49 ವರ್ಷ ಮತ್ತೊಬ್ಬ ಮಹಿಳೆ ಕೂಡ ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದು, 2ನೇ ಹಂತವನ್ನು ತಲುಪಿದ್ದರು. ಇವರಿಗೂ ಐಒಆರ್‌ಟಿ ಚಿಕಿತ್ಸೆ ನೀಡಿದ್ದು, ಇದು ಯಸ್ವಿಯಾಗಿದೆ. ಬೇರೆ ಆರೋಗ್ಯ ಅಂಗಾಂಶಗಳಿಗೆ ಹಾನಿಯಾಗಿಲ್ಲವೆಂದು ತಿಳಿಸಿದರು.
ಈ ಕುರಿತು ಗೋಕುಲ ಎಜುಕೇಷನ್ ಫೌಂಡೇಷನ್ (ಮೆಡಿಕಲ್) ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಮಾತನಾಡಿ ನಮ್ಮಲ್ಲಿರುವ ಕ್ಲಿನಿಕಲ್ ಎಕ್ಸ್ ಪರ್ಟ್ ಕ್ಯಾನ್ಸರ್ ಗುಣಪಡಿಸುವ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ನಮ್ಮಲ್ಲಿರುವ ಕೌಶಲ್ಯ ಭರಿತ ನುರಿತ ವೈದ್ಯರ ತಂಡ ಉತ್ತಮ ಚಿಕಿತ್ಸೆ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಗೋಕುಲ ಎಜುಕೇಷನ್ ಫೌಂಡೇಷನ್ ಮುಖ್ಯ ಕಾರ್ಯಕಾರಿ ನಿರ್ದೇಶಕ ಎಂ.ಆರ್.ಶ್ರೀನಿವಾಸ ಮೂರ್ತಿ ಮಾತನಾಡಿ, ನಮ್ಮ ವೈದ್ಯರ ತಂಡ ಕ್ಯಾನ್ಸರ್ ರೋಗಿಗಳ ಜೀವಿತಾವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ಕೈಗೊಂಡು ಹೊಸ ವಿಧಾನವನ್ನು ಪತ್ತೆ ಮಾಡಿದ್ದಾರೆ. ಇದು ಕ್ಯಾನ್ಸರ್ ರೋಗಿಗಳಿಗೆ ಉತ್ತಮವಾಗಿ ಕೆಲಸ ಮಾಡಲಿದೆ ಎಂದರು.
ರಾಮಯ್ಯ ಸ್ಮಾರಕ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಸಿ.ನಾಗೇಂದ್ರ ಸ್ವಾಮಿ ಮಾತನಾಡಿ, ನಾವು ಕ್ಯಾನ್ಸರ್ ಚಿಕಿತ್ಸಾ ವಿಧಾನದಲ್ಲಿ ನೂತನ ತಂತ್ರಜ್ಞಾನವನ್ನು ಪರಿಚಯಿಸಿದ್ದೇವೆ. ಐಒಆರ್‌ಟಿ ಎಕ್ಸ್ರೇ ಡಿವೈಸ್ ಪರಿಚಯಿಸುತ್ತಿದ್ದೇವೆ. ಇದು ಕ್ಯಾನ್ಸರ್ ಚಿಕಿತ್ಸಾ ವಿಧಾನವನ್ನು ಸುಧಾರಿಸುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಔಷಧಿಗಳನ್ನು ಸಹ ಕಡಿಮೆ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಹರೀಶ್, ಸಿಒಎಫ್ ಡಾ.ಮದನ್ ಗಾಯಕ್‌ವಾಡ್, ಡಾ.ಕೀರ್ತಿ ಕೌಶಿಕ್ ಇತರರು ಇದ್ದರು