December 23, 2024

ಬೆಂಗಳೂರು: ವೇದ ಜ್ಞಾನದಲ್ಲಿ ಉಲ್ಲೇಖವಾಗಿರುವ ಮಹಿಳೆಯರ ಆದರ್ಶಪ್ರಾಯ ಸದ್ಗುಣಗಳ ಎರಡು ದಿನಗಳ ವಿಚಾರಸಂಕಿರಣವು ಈ ತಿಂಗಳ 22 ಮತ್ತು 23ರಂದು ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯಲಿದೆ.
ಈ ವಿಚಾರ ಸಂಕಿರಣವು ವಿವೇಕ (ಬುದ್ಧಿವಂತಿಕೆ), ವಿನಯ (ವಿನಯ), ವೀರ್ಯ (ಧೈರ್ಯ) ಮತ್ತು ವಿಚಾರಕ (ಚಿಂತನಶೀಲತೆ) ಸದ್ಗುಣಗಳಿಗೆ ಆದ್ಯತೆ ನೀಡಿರುವ ಭಾರತದ ಪ್ರಾಚೀನ ವೇದ ಜ್ಞಾನದಲ್ಲಿ ನಿರೂಪಿಸಿರುವ ಮಹಿಳೆಯರ ಸಹಜ ಗುಣಗಳ ಮಹತ್ವವನ್ನು ಅನ್ವೇಷಿಸುವ ಗುರಿ ಹೊಂದಿದೆ.
ಮೇ 22 ರಂದು ಸಂಜೆ 5.15ಕ್ಕೆ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್‌, ಕರ್ನಾಟಕದ ಕರಕುಶಲ ಮಂಡಳಿ ಅಧ್ಯಕ್ಷೆ ಮಂಗಳಾ ನರಸಿಂಹನ್‌ ಮತ್ತು ಪರಿಕಲ್ಪನೆ ನಿರೂಪಕಿ ಡಾ. ಉಷಾ ಆರ್. ಕೆ ಅವರು ಭಾಗಿಯಾಗಲಿದ್ದಾರೆ. ಉದ್ಘಾಟನೆ ನಂತರ ಸಂವಾದ ಕಾರ್ಯಕ್ರಮ ಹಾಗೂ ಖ್ಯಾತ ಕಲಾವಿದರಿಂದ ಆಕರ್ಷಕ ಪ್ರದರ್ಶನ ನಡೆಯಲಿದೆ.
ಶ್ರದ್ಧಾ ಅಪರ್ಣಾ ಅವರು ಮಹಿಳೆಯರಿಗೆ ನಮನ ಸಲ್ಲಿಸಲಿದ್ದಾರೆ. ನಿಖಿತಾ ಮಂಜುನಾಥ್ ಅವರು ವನಿತೆಯರ ಸದ್ಗುಣಗಳಿಗೆ ನಮನ ಸಲ್ಲಿಸಲಿದ್ದಾರೆ. ಮಹಿಳೆಯರ ಮೊದಲ ಎರಡು ಸದ್ಗುಣಗಳಾದ ವಿವೇಕ ಮತ್ತು ವಿನಯ ಗುಣಲಕ್ಷಣಗಳ ಪೈಕಿ ವಿವೇಕ ಗುಣ ವಿಶೇಷತೆಗೆ, ಮಹಾ ಸರಸ್ವತಿ ಪಾತ್ರವನ್ನು ಶ್ರೇಯಸಿ ಗೋಪಿನಾಥ್ ಮತ್ತು ಮೈತ್ರೇಯಿ ಪಾತ್ರವನ್ನು ಸೌಂದರ್ಯ ಶ್ರೀವತ್ಸ ಅವರು ಪ್ರದರ್ಶಿಸಲಿದ್ದಾರೆ.
ಇನ್ನೊಂದು ಗುಣ ವಿಶೇಷತೆಯಾಗಿರುವ ವಿನಯಕ್ಕೆ ರಾಧಾ ರಾಣಿ ಪಾತ್ರದ ಮೂಲಕ ನಂದಿನಿ ಗಣೇಶನ್‌ ಮತ್ತು ಸೀತಾ ಪಾತ್ರವನ್ನು ಅನುರಾಧಾ ಪಟವರ್ಧನ್‌ ಅವರು ಪ್ರದರ್ಶಿಸಲಿದ್ದಾರೆ.

2ನೇ ದಿನದ ಕಾರ್ಯಕ್ರಮಗಳು:
ಖ್ಯಾತ ನೃತ್ಯಗಾರ್ತಿ ಪದ್ಮಿನಿ ರವಿ, ನಗು ಯೋಗ ಚಿಕಿತ್ಸೆ ಪರಿಣತಿಯೂ ಆಗಿರುವ ನೃತ್ಯ ಸಂಯೋಜಕಿ ಡಾ.ಸುಚಿತ್ರಾ ಕೌಲ್‌ ಮಿಶ್ರಾ ಹಾಗೂ ಪರಿಕಲ್ಪನೆ ನಿರೂಪಕಿ ಡಾ.ಉಷಾ ಆರ್‌ಕೆ ಅವರ ಜೊತೆ ವಿಚಾರ ಪ್ರಚೋದಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ಎರಡನೇ ದಿನ ಪ್ರಮುಖವಾಗಿ ಚರ್ಚೆಯಾಗುವ ಸದ್ಗುಣತೆಗಳಲ್ಲಿ ವೀರ್ಯ (ಧೈರ್ಯ) ಮತ್ತು ವಿಚಾರಕ (ಚಿಂತನಶೀಲತೆ) ಸೇರಿವೆ.
ಶ್ರದ್ಧಾ ಅಪರ್ಣಾ ಅವರು ಮಹಿಳೆಯರಿಗೆ ಹಾಗೂ ಮಹಿಳೆಯರ ಸದ್ಗುಣಗಳಿಗೆ ದಿವ್ಯಾ ಪ್ರಭಾತ್‌ ಅವರು ನಮನ ಸಲ್ಲಿಸಲಿದ್ದಾರೆ. ವೀರ್ಯ ಸದ್ಗುಣಕ್ಕೆ ಕೀರ್ತನಾ ರವಿ ಅವರು ಮಂಡೋದರಿ ಪಾತ್ರದ ಮೂಲಕ ಹಾಗೂ ನವಿಯಾ ನಟರಾಜನ್‌ ಅವರು ದ್ರೌಪದಿ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ.
ವಿಚಾರಕ ಸದ್ಗುಣವನ್ನು ಗರ್ಗಿ ಪಾತ್ರದ ಮೂಲಕ ಸಯಾನಿ ಚಕ್ರವರ್ತಿ ಮತ್ತು ಉಭಯ ಭಾರತಿ ಪಾತ್ರವನ್ನು ಶಿವರಂಜನಿ ಹರೀಶ್‌ ಅವರು ನಿರ್ವಹಿಸಲಿದ್ದಾರೆ.
ಎರಡು ದಿನಗಳ ವಿಚಾರ ಸಂಕಿರಣಕ್ಕೆ ಟಿಕೇಟ್ ಖರೀದಿಸಿ ಭಾಗವಹಿಸಬಹುದು. ಆಸಕ್ತರು ಟಿಕೆಟ್‌ ಖರೀದಿಸಲು ನಿಖಿತಾ ಮಂಜುನಾಥ್-96324 61415 ಅವರನ್ನು ಸಂಪರ್ಕಿಸಬಹುದು.
ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಡಾ ಉಷಾ ಆರ್‌ಕೆ /  95999 12266