ಬೆಂಗಳೂರು: ಇಟ್ಟಮಡುವಿನ ಭುವನೇಶ್ವರಿ ನಗರದ ಶ್ರೀಬೃಂದಾವನ ವಸತಿ ಸಮುಚ್ಚಯದ ಸಭಾಂಗಣದಲ್ಲಿ 09-06-2024 ರ ಭಾನುವಾರ ಸಂಜೆ ಯಕ್ಷಗಾನ ತರಬೇತಿಯ ತರಗತಿಯನ್ನು ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರು, ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರು ಉದ್ಘಾಟಿಸಿದರು.
ತರಬೇತಿ ತರಗತಿಗೆ ಸ್ಥಳಾವಕಾಶ ನೀಡಿ ಸಹಕರಿಸಿದ ಸುರೇಶ.ಕೆ.ಬಿ ಹಾಗೂ ನಿರ್ಮಲರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಯಲ್ಲಿ ಭಾಗವಹಿಸಿದ್ದರು. ಮೈಸೂರಿನ ಡಾ.ಗಂಗೂ ಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದಿಂದ ಮಾನ್ಯತೆ ಪಡೆದ ಕಲಾಕದಂಬ ಆರ್ಟ್ ಸೆಂಟರ್ ಈ ತರಗತಿಯನ್ನು ನಡೆಸುತ್ತಿದೆ. ಆಸಕ್ತರು 9448510582- 8217594543 ಈ ಮೊಬೈಲ್ ನಂಬರ್ ಸಂಪರ್ಕಿಸಬಹುದೆಂದು ಕಲಾಕದಂಬ ಸಹ ನಿರ್ದೇಶಕಿಯಾದ ಅದಿತಿ ಉರಾಳ ತಿಳಿಸಿದರು.