ಉಡುಪಿ: ಶ್ರೀಪುತ್ತಿಗೆ ವಿಶ್ವ ಗೀತಾ ಪರ್ಯಾಯ 2024-2026 ರ ಪರ್ಯಾಯ ಮಠಾಧೀಶರು ಹಾಗೂ ಪುತ್ತಿಗೆ ಮಠಾಧೀಶರಾದ ಶ್ರೀಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂ ಗಳವರು ಇಂದು
“ಭಾಗೀರಥೀ ಜಯಂತಿ”ಯ ಅಂಗವಾಗಿ ಮಧ್ವ ಸರೋವರದಲ್ಲಿ ಭಾಗೀರಥೀ ಅಮ್ಮನವರ ಸನ್ನಿಧಾನದಲ್ಲಿ “ತೊಟ್ಟಿಲುಪೂಜೆ” ನೆರವೇರಿಸಿದರು. ಈ ಸಂದರ್ಭದಲ್ಲಿ ಪುತ್ತಿಗೆ ಮಠದ ಕಿರಿಯ ಸ್ವಾಮೀಜಿ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.