ಬೆಂಗಳೂರು: ಕರ್ನಾಟಕದ ಪ್ರಮುಖ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಸೇವಾ ಕಾರ್ಯವು ಶ್ಲಾಘನೀಯವಾಗಿದೆ ಎಂದು ಬಹುಭಾಷಾ ನಟಿ ಶ್ರೀಮತಿ ಪ್ರಿಯಾಂಕ ಉಪೇಂದ್ರ ಹೇಳಿದರು. ಅವರು ಇಂದು ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ರಾಜರಾಜೇಶ್ವರಿ ನಗರ
ಶಾಖೆಯಲ್ಲಿ ತಾಯಿ ಮತ್ತು ಮಕ್ಕಳಿಗೆ ಮೀಸಲಾದ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ಈ ಮೀಸಲಾದ ಸೌಲಭ್ಯವು ನಿರೀಕ್ಷಿತ ತಾಯಂದಿರಿಗೆ ತಾಯ್ತನದ ಅನೇಕ ಸಂತೋಷಗಳ ಪ್ರಾರಂಭವನ್ನು ಅನುಭವಿಸಲು ವಿಶೇಷ ವಾತಾವರಣ ಒದಗಿಸುತ್ತದೆ. ಒಬ್ಬ ತಾಯಿ ಮತ್ತು ಮಹಿಳೆಯಾಗಿ ಆರ್.ಆರ್.ನಗರದ ಸ್ಪರ್ಶ್ ಆಸ್ಪತ್ರೆಯು ತಾಯಂದಿರು ಮತ್ತು ಮಕ್ಕಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಆದ್ಯತೆಯನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದರು.
ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಅಧ್ಯಕ್ಷರು ಮತ್ತು ಮುಖ್ಯ ಆರ್ಥೋಪೆಟಿಕ್ ಸರ್ಜನ್ ಡಾ.ಶರಣ ಪಾಟೀಲ್ ಮಾತನಾಡಿ ಗರ್ಭಾವಸ್ಥೆಯಲ್ಲಿ ಉಂಟಾಗುವ ಸಂಕೀರ್ಣ ವೈದ್ಯಕೀಯ ಸವಾಲುಗಳನ್ನು ನಿರ್ವಹಿಸಲು ನಮ್ಮ ತಾಯಿ ಮತ್ತು ಮಕ್ಕಳ ಆರೈಕೆ ಸೌಲಭ್ಯವು ಸಂಪೂರ್ಣವಾಗಿ ಸಿದ್ಧವಾಗಿದೆ. ಉತ್ಕೃಷ್ಟತೆಗೆ ನಿಖರವಾದ ಗಮನ ನೀಡಿ, ತಾಯಂದಿರು ಮತ್ತು ಮಕ್ಕಳು ಕಾಳಜಿ ಮತ್ತು ಬೆಂಬಲದ ವಾತಾವರಣದಲ್ಲಿ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯುವುದು ನಮ್ಮ ಗುರಿಯಾಗಿದೆ. ಆಸ್ಪತ್ರೆ ಒದಗಿಸುವ ಉತ್ತಮ ಮಟ್ಟದ ಚಿಕಿತ್ಸೆಯ ಮೂಲಕ ಕುಟುಂಬಗಳಲ್ಲಿ ವಿಶ್ವಾಸ ಮೂಡಿಸುವುದು ನಮ್ಮ ಉದ್ದೇಶ. ಅಲ್ಲದೆ ಅವರ ಮಗುವಿನ ಯೋಗಕ್ಷೇಮ ನಮ್ಮ ತಂಡದ ಎಲ್ಲಾ ಸದಸ್ಯರ ಪ್ರಮುಖ ಆದ್ಯತೆಯಾಗಿದೆ. ಪ್ರತಿ ತಾಯಿ ಮಗುವಿನ ವಿಶಿಷ್ಟತೆ ಮತ್ತು ಅವರ ನಿರ್ದಿಷ್ಟ ವೈದ್ಯಕೀಯ ಅಗತ್ಯಗಳನ್ನು ಗುರುತಿಸಿ ಅವರ ದೈಹಿಕ ಮತ್ತು ಭಾವನಾತ್ಮಕ ಅಗತ್ಯತೆಗಳನ್ನ ಪರಿಹರಿಸುವ ಸೂಕ್ತವಾದ ಚಿಕಿತ್ಸೆ ಒದಗಿಸಲು ನಾವು ಬದ್ಧರಾಗಿದ್ದೇವೆ ತಂಡದ ಮೂಲಕ ಈ ಗುರಿಯನ್ನು ತಲುಪಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ
ಸ್ಪರ್ಶ್ ಸಮೂಹ ಆಸ್ಪತ್ರೆಗಳ ನಿರ್ದೇಶಕಿ ಶ್ರೀಮತಿ ಪಾಟೀಲ್, ಸಿಇಒ ಜೋಸೆಫ್ ಪಸಂಗ, ಘಟಕದ ಸಿಒಒ ಸುಧೀಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.