“ಅಖಂಡ ಭಾರತದಲ್ಲಿ
ಇಂದು
78ರ ಸ್ವಾತಂತ್ರ್ಯ ಡಿಂಡಿಮ”
“ಮಡಿದ,ದುಡಿದ, ಬಲಿಯಾದ
ನೆತ್ತರು ಹರಿಸಿದ ದೇಶಭಕ್ತರು, ನೀಡಿದರು ನಮಗೆ ಸಂಭ್ರಮ”
“ಅಲೆಗಳನ್ನು ಬೇರ್ಪಡಿಸಿದ
ಹಡಗೊಂದು, ಅಡಿಗಾಲು ಇಟ್ಟಿತು ಇಂಡಿಯಾದಲ್ಲಿ.
ಅಜ್ಞಾನಿಗಳ ಗೂಡು ಇದು ಎಂದು ನೆಟ್ಟರು ತಮ್ಮ ಬಾವುಟವನ್ನು ಇಲ್ಲಿ.
“ಪ್ರಶ್ನಿಸುವವರು ಇಲ್ಲ..
ಪರಾಮರ್ಶಿಸುವವರು ಇಲ್ಲ..
ವಿಚಾರವಂತರು ಇಲ್ಲ. ವಿವೇಕಿಗಳು ಇಲ್ಲ.
ಹೀಗೆ ಯಾರಿಲ್ಲದವರ ನಾಡಿನಲ್ಲಿ ನಾವೇ ಎಲ್ಲಾ ಎಂದು ಮೆರೆದರು.”
“ರತ್ನ ಖಚಿತ ಸಿಂಹಾಸನಾದೀಶ್ವರರ
ಕಿರೀಟಗಳನ್ನು
ಕಸಿದರು.. ಒಡೆದು ಆಳುತ್ತಾ.
“ರಕ್ತ ಬಸಿದು, ಬೆವರ ಸುರಿಸುವವರ
ಮಾನಗಳನ್ನು ದೋಚಿದರು
ಗುಲಾಮರನ್ನಾಗಿಸಿದರು
ನೆಲವನ್ನೇ ದೋಚುತ್ತಾ”
“ಇಂಡಿಯಾದಲ್ಲಿ ಈಸ್ಟ್ ಇಂಡಿಯಾ.. ಕಂಪನಿ
ಆಡಿದ್ದೆ ಆಟ. ಮಾಡಿದ್ದೆ ರೂಲು.
ಎಲ್ಲದರಲ್ಲೂ ಅವರದ್ದೇ ಪಾಲು
ಭಾರತೀಯರಿಗೆ ನಿರಂತರ ಸೋಲು.”
“ಎದುರಿಸಿ ಹೊರಟ ವೀರ ಧೀರರೆಲ್ಲರೂ.. ನೇಣಿನ ಕಂಬಕ್ಕೆ
ಮಿತಿ ಇಲ್ಲದಾಯಿತು ಬ್ರಿಟಿಷ್ ಕ್ರೌರ್ಯಕ್ಕೆ..
ಮುಕ್ತಿಯೆಂದು ಭಾರತಾಂಬೆಗೆ
ಸಿಲುಕಿದ ಶಾಪಕ್ಕೆ.
“ರೈಲಿನಿಂದ ಹೊರ ತಬ್ಬಿದ
ಕ್ಷಣದಲ್ಲಿ ಹುಟ್ಟಿದ ಕಿಡಿ ಒಂದು, ಶಾಂತಿಯ ಕ್ರಾಂತಿಯಾಗಿ
ಆದರು ರಾಷ್ಟ್ರಪಿತ.
ಸರ್ವ ಸ್ವಾತಂತ್ರ್ಯದ ಸಂಜಾತ.”
“ಅವರೇ ಕೊಟ್ಟ ಸರ್ವ ಶಿಕ್ಷಣ
ಸಮಾರೋಪಾದಿಯಲ್ಲಿ..
ಸ್ವಾತಂತ್ರ ಸಂಗ್ರಾಮದ
ಜ್ವಾಲೆಯಾಯಿತು.
ಹೋರಾಟವದು ದೇಶವಿಡಿ ಜ್ವಲಂತವಾಯಿತು.”
“ಬಂತು ನಮಗೆ ಸ್ವಾತಂತ್ರ್ಯ
ಆಗಸ್ಟ್ 15ರ ಮಧ್ಯರಾತ್ರಿ .
ಕಳೆಯಿತು ಕೋಟಿ ಕೋಟಿ ಭಾರತೀಯರ ಕೊರಗು”
“ಇಂದು 78ರ ಸ್ವಾತಂತ್ರ್ಯದ ಡಿಂಡಿಮ ಮಾತ್ರವಲ್ಲ..
ವಿಜ್ಞಾನ ತಂತ್ರಜ್ಞಾನ ಆವಿಷ್ಕಾರಗಳ ಭಾರತದ ಸಾಧನೆ ವಿಶ್ವಕ್ಕೆ ಮೆರಗು.”
ಜೈ ಹಿಂದ್.
ವಂದೇ ಮಾತರಂ..
-ಡಾ.ಗುಣವಂತ ಮಂಜು, ಸಾಹಿತಿಗಳು, ಚಲನ ಚಿತ್ರ ನಿರ್ದೇಶಕರು.