ಬೆಂಗಳೂರು: “ಉದ್ಭವ ಕಲಾವಿದರು” ಸಂಸ್ಥೆಯ 5ನೇ ವಾರ್ಷಿಕೋತ್ಸವ ಹಾಗು 69 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಾಯ ಭವನದಲ್ಲಿ ದಿ. 20-11-2024 ಮತ್ತು 21-11-2024 ರಂದು 2 ದಿನಗಳ ಕಾಲ 3 ನಾಟಕಗಳ “ನಾಟಕೋತ್ಸವವು ಯಶಸ್ವಿಯಾಗಿ ನಡೆಯಿತು.ಮೊದಲ ದಿನ ನಾಟಕೋತ್ಸವವನ್ನು ಚಲನಚಿತ್ರ ದೂರದರ್ಶನ ರಂಗಭೂಮಿ ನಟಿ ಶ್ರೀಮತಿ ಲಕ್ಷ್ಮೀ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಎಚ್.ಎ.ಪಾರ್ಶ್ವನಾಥ್, ಪ್ರೆಸ್ ಕ್ಲಬ್ ನ ನಿಕಟ ಪೂರ್ವ ಉದ್ಯೋಗಿ ಶಿವರುದ್ರಪ್ಪ, ಕರಾಟೆ ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.ನಾಗೇಂದ್ರ ಪ್ರಸಾದ್ ನಿರ್ದೇಶನದ ಮೊದಲ ನಾಟಕ “ತೀರ್ಥ ಬೇಕಾ? ಬೇಡ್ವಾ ?”ಚಿಕ್ಕ ಪ್ರಹಸನವಾದರೂ ಚೊಕ್ಕವಾಗಿ ಮೂಡಿಬಂದಿತು. ಸಂಜೆ ಪ್ರಾರಂಭವಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರಚಿತ ಭಾಸ್ಕರ್ ಗೌಡ ನಿರ್ದೇಶನದ “ಕೃಷ್ಣೇಗೌಡನ ಆನೆ” ಪ್ರೇಕ್ಷಕರರಿಗೆ ಹಾಸ್ಯದ ರಸದೌತಣ ನೀಡಿದ್ದು ಗಮನಾರ್ಹವಾಗಿದೆ.ಎರಡನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀವಿವೇಕಾನಂದ ಸದ್ಭಾವನಾ ಪ್ರಶಸ್ತಿಯನ್ನು ಗಂಡಸಿ ಸದಾನಂದ ಸ್ವಾಮಿ, ಕರಾಟೆ ಶ್ರೀನಾಥ್, ಶ್ರೀಮತಿ ಲಕ್ಷ್ಮೀ ಭಟ್, ಅಶ್ವಥ್ ನಾರಾಯಣ ಜೋಯಿಸ್, ವೆಂಕಟೇಶ್ ಶಾಸ್ತ್ರೀ, ಶಶಿಧರ್, ಎಸ್.ಬಾಲು ರವರಿಗೆ ವಿತರಿಸಲಾಯಿತು. ಹಿರಿಯರಾದ ಡಾ.ಎಚ್.ಎ ಪಾರ್ಶ್ವನಾಥ್ ಹಾಗೂ ಕಿರಿಯರಂಗ ಸಂಘಟಕ ನಟ, ನಿರ್ದೇಶಕ ಭಾಸ್ಕರ್ ಗೌಡ ರವರು “ರಂಗ ಗೌರವ”ಕ್ಕೆ ಪಾತ್ರರಾಗಿದ್ದು ವಿಶೇಷವಾಗಿತ್ತು.ಡಾ.ಚಂದ್ರಶೇಖರ ಕಂಬಾರ ವಿರಚಿತ ಭಾಸ್ಕರ್ ಗೌಡ ನಿರ್ದೇಶನದ “ಬೆಪ್ಪು ತಕ್ಕಡಿ ಬೋಳೇಶಂಕರ” ನಾಟಕ ಪ್ರೇಕ್ಷಕರ ಮನ ಸೆಳೆಯಿತು. “ಉದ್ಭವ ಕಲಾವಿದರ” ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಪ್ರಸಾದ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಶಾಂತ ಪ್ರಸಾದ್ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿದ್ದರು. ಶ್ರೀರಂಗ ನಿಧಿ ಯವರು ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿದರು.-ಡಾ..ಹೆಚ್.ಎ.ಪಾರ್ಶ್ವನಾಥ್, ರಂಗ ಚಿಂತಕರು,
ಜಂಟಿ ನಿರ್ದೇಶಕರು,
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ.