ತುರುವೇಕೆರೆ: 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಕಣಕೂರು ಪಿ.ಎಸ್.ಸಿ.ಎಂ.ಎಸ್ ನಿವೃತ್ತ ಸಿಇಓ ಮತ್ತು ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಕೆ.ಸಿ.ಗಂಗಾಧರಯ್ಯ (75) ವಯೋಸಹಜದಿಂದ ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ 8:00 ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೃತರು ಮೂವರು ಗಂಡು ಮಕ್ಕಳು, ಮೂವರು ಪುತ್ರಿಯರನ್ನು ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಮಿತ್ರರನ್ನಗಲಿದ್ದಾರೆ.
ಮೃತರ ಅಗಲಿಕೆಗೆ ಕ್ಷೇತ್ರದ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ಮಸಾಲ ಜಯರಾಮ್, ಬೆಮೆಲ್ ಕಾಂತರಾಜು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎನ್.ಆರ್.ಜಯರಾಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಸೇರಿದಂತೆ ಹಲವು ರಾಜಕೀಯ ಮುಖಂಡರುಗಳು, ತಾಲೂಕಿನ ಜನಪ್ರತಿನಿಧಿಗಳು ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ. ಗಂಗಾಧರಯ್ಯ ರವರ ಅಂತ್ಯಕ್ರಿಯ ಸಂಜೆ 4:00 ಗಂಟೆಗೆ ಮಾಯಸಂದ್ರ ಹೋಬಳಿಯ ಕಣಕೂರು ಗೇಟಿನಲ್ಲಿರುವ “ಬದುಕು ಫಾರಂ” ಹೌಸ್ ನಲ್ಲಿ ನೆರವೇರಲಿದೆ.
ಬಂಧು ಮಿತ್ರರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆತ್ಮಕ್ಕೆ ಚಿರಶಾಂತಿ ಎಂದು ಕೋರಬೇಕೆಂದು ಮೃತರ ಪುತ್ರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷರಾದ ಕಣಕೂರು ಚಂದ್ರಶೇಖರ್ ತಿಳಿಸಿದ್ದಾರೆ.