Lಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2500 ನಿರ್ವಾಹಕ ಹುದ್ದೆಯ ನೇಮಕಾತಿ ಸಂಬಂಧ 371-ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ 212 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲಾಗಿತ್ತು. ಇಂದು ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರು ನೇಮಕಾತಿ ಆದೇಶ ಪತ್ರಗಳನ್ನು ವಿತರಿಸುವ ಮೂಲಕ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಜಾಹೀರಾತು ಪಡಿಸಿರುವ ಹುದ್ದೆಗಳ ಸಂಖ್ಯೆ -214. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಖ್ಯೆ 5410. ಶೇ.30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳ ಸಂಖ್ಯೆ 1334. 1:5 ಪ್ರಮಾಣದಲ್ಲಿ ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಗೆ ಕರೆಯಲಾದ ಅಭ್ಯರ್ಥಿಗಳು 657. ಮೂಲ ದಾಖಲೆ/ದೇಹದಾರ್ಢ್ಯತೆ ಪರಿಶೀಲನೆಯಲ್ಲಿ ಅರ್ಹತೆಗೊಂಡ ಅಭ್ಯರ್ಥಿಗಳು 535.
ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ 212.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ಆರ್, (ಭಾ.ಆ.ಸೇ)., ನಿರ್ದೇಶಕರು (ಭದ್ರತಾ ಮತ್ತು ಜಾಗೃತ) ಅಬ್ದುಲ್ ಅಹದ್, (ಭಾ.ಪೋ.ಸೇ.) ನಿರ್ದೇಶಕರು (ಮಾಹಿತಿ ತಂತ್ರಜ್ಞಾನ)ರಾದ ಶ್ರೀಮತಿ ಶಿಲ್ಪಾ.ಎಂ.,(ಭಾ.ಆ.ಸೇ.) ರವರು ಹಾಗೂ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.