ತುರುವೇಕೆರೆ: ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ಸಹಕಾರದೊಂದಿಗೆ 18ನೇ ಏಷ್ಯನ್ ಚಾಂಪಿಯನ್ ಶಿಪ್ ಹ್ಯಾಂಡ್ ಬಾಲ್ ಜೋರ್ಡಾನ್ ದೇಶದಲ್ಲಿ ಜುಲೈ 14 ರಿಂದ 26ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ- ಟಿ.ಬಿ. ಕ್ರಾಸ್ ನಲ್ಲಿರುವ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ,ಎಸ್ ಬಿ ಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾದ ಅಭಿಷೇಕ್ ಎನ್.ಎಸ್. ರವರು ಭಾರತ ತಂಡಕ್ಕೆ ಆಯ್ಕೆಯಾಗಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಭಾರತ ತಂಡಕ್ಕೆ ಆಯ್ಕೆಯಾದ ತಮ್ಮ ಸಂಸ್ಥೆಯ ವಿದ್ಯಾರ್ಥಿಗೆ ಶ್ರೀಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪ್ರಧಾನ ಕಾರ್ಯದರ್ಶಿಗಳು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ಬ್ರಹ್ಮಚಾರಿಗಳು ರಾಜಶೇಖರನಾಥ ಜಿ ,
ಪ್ರೊ.ಪುಟ್ಟರಂಗಪ್ಪ ಆಡಳಿತಾಧಿಕಾರಿಗಳು.
ಎ.ಬಿ.ಚಂದ್ರಶೇಖರ್ ಪ್ರಾಂಶುಪಾಲರು ಪ್ರಥಮ ದರ್ಜೆ ಕಾಲೇಜು.
ಸೈಯದ್ ಉಪ ಪ್ರಾಂಶುಪಾಲರು.
ಗಿರೀಶ್ ಎಸ್ ಬಿ ಜಿ ವಿದ್ಯಾಲಯ ಪ್ರಾಂಶುಪಾಲರು, ರಾಜು ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು,
ತರಬೇತುದಾರರು ಸಿ.ಪಿ.ಉದಯ್ ಕುಮಾರ್, ಶಂಕರ್, ಗಿರಿಧರ್, ಮಾದೇಶ್ ಸ್ವಾಮಿ ಸೇರಿದಂತೆ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಪೋಷಕರು ಅಭಿನಂದಿಸಿ ಶುಭಕೋರಿದ್ದಾರೆ.
-ಸಚಿನ್ ಮಾಯಸಂದ್ರ.